ಜನಸಂಖ್ಯಾ ಸ್ವರೂಪ ಬದಲಾವಣೆ ಕುರಿತು ಅಧ್ಯಯನ: ಅಮಿತ್ ಶಾ ಅಧ್ಯಕ್ಷತೆಯಲ್ಲಿ ಸಭೆ
ನವದೆಹಲಿ: ಜನಸಂಖ್ಯಾ ಸ್ವರೂಪ ಬದಲಾವಣೆ ಕುರಿತು ಅಧ್ಯಯನ ನಡೆಸಲಿರುವ ಉನ್ನತ ಮಟ್ಟದ ಸಮಿತಿಗೆ ಅಗತ್ಯ ಸೌಲಭ್ಯ ಒದಗಿಸುವುದನ್ನು ಖಾತರಿಪಡಿಸಿಕೊಳ್ಳಲು ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರ ಅಧ್ಯಕ್ಷತೆಯಲ್ಲಿ ಶನಿವಾರ ಸಭೆ ನಡೆಯಿತು. ನ್ಯಾಯಮೂರ್ತಿ ಪ್ರಜಾಶ್ ಪ್ರಭಾಕರ್ ಅವರ ನೇತೃತ್ವದ ಸಮಿತಿಯು, ಜನಸಂಖ್ಯೆ ಬದಲಾವಣೆ ಹಾಗೂ ವಿಶೇಷವಾಗಿ ಗಡಿ ಪ್ರದೇಶಗಳಲ್ಲಿ ಈ ಕುರಿತು ಅಧ್ಯಯನ ಮಾಡಲಿದೆ. ‘ಈಗಾಗಲೇ ಸಮಿತಿಯ ಮೊದಲ ಸಭೆ ನಡೆದಿದ್ದು, ಕಾರ್ಯಸೂಚಿಯನ್ನೂ ರೂಪಿಸಲಾಗಿದೆ. ಸಮಿತಿಗೆ ಸಚಿವಾಲಯವು ಅಗತ್ಯ ಬೆಂಬಲವನ್ನು ನೀಡುತ್ತದೆ’ ಎಂದು ಗೃಹ ಸಚಿವಾಲಯದ ವಕ್ತಾರರು ತಿಳಿಸಿದ್ದಾರೆ.