ರಕ್ಷಿತ್ ಶೆಟ್ಟಿ ಹುಟ್ಟುಹಬ್ಬದ ದಿನ ರಿಷಬ್ ಶೆಟ್ಟಿ ಕೊಟ್ರು ಬಿಗ್ ಅಪ್ಡೇಟ್
ಬೆಂಗಳೂರು: ಇಂದು (ಜೂ.6) ಸಿಂಪಲ್ ಸ್ಟಾರ್ ರಕ್ಷಿತ್ ಶೆಟ್ಟಿ (Rakshit Shetty) ಅವರ ಹುಟ್ಟುಹಬ್ಬ. ಅವರ ಸಿನಿಮಾದ ವಿಚಾರವಾಗಿ ಬಿಗ್ ಅಪ್ಡೇಟ್ ಬರುವ ಬಗ್ಗೆ ಫ್ಯಾನ್ಸ್ ನಿರೀಕ್ಷೆ ಮಾಡಿದ್ದರು. ಆದರೆ ಅವರ ಸ್ನೇಹಿತ ರಿಷಬ್ ಶೆಟ್ಟಿ ಅವರು ರಕ್ಷಿತ್ ಶೆಟ್ಟಿ ಕುರಿತು ಹೊಸ ಸುದ್ದಿ ಹಂಚಿಕೊಂಡಿದ್ದಾರೆ. ʼಸಪ್ತ ಸಾಗರದಾಚೆ ಎಲ್ಲೋʼ ಬಳಿಕ ರಕ್ಷಿತ್ ಯಾವ ಸಿನಿಮಾದಲ್ಲೂ ಕಾಣಿಸಿಕೊಂಡಿಲ್ಲ. ನಟನೆಯ ಜತೆಗೆ ಅವರು ನಿರ್ದೇಶನ ಮಾಡುವ ಚಿತ್ರಗಳಿಗೆ ಪ್ರತ್ಯೇಕ ಅಭಿಮಾನಿಗಳಿದ್ದಾರೆ. 'ಸಿಂಪಲ್ಲಾಗ್ ಒಂದ್ ಲವ್ ಸ್ಟೋರಿ' ಮೂಲಕ ಕನ್ನಡಿಗರ ಮನಗೆದ್ದು, ʼಕಿರಿಕ್ ಪಾರ್ಟಿʼ, , '777 ಚಾರ್ಲಿ'ಯಿಂದ ಸಖತ್ ಸೌಂಡ್ ಮಾಡಿದ ರಕ್ಷಿತ್ ಶೆಟ್ಟಿ ಮುಂದೆ ಸಾಲು ಸಾಲು ಸಿನಿಮಾಗಳಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಇತ್ತೀಚೆಗಷ್ಟೇ ರಕ್ಷಿತ್ ಶೆಟ್ಟಿ ಒಟ್ಟು ಐದು ಚಿತ್ರಗಳ ಸ್ಕ್ರಿಪ್ಟ್ ಪೂರ್ಣಗೊಳಿಸಿದ್ದು, ಮೊದಲು 'ರಿಚರ್ಡ್ ಆಂಟನಿ' ಚಿತ್ರವನ್ನು ಕೈಗೆತ್ತಿಕೊಳ್ಳಲಿದ್ದಾರೆ ಎಂದು ಸಂದರ್ಶವೊಂದರಲ್ಲಿ ಹೇಳಿದ್ದರು.