Select Location
All Locations
State
Region
City / District
Dk Shivakumar's Cabinet: ಡಿಕೆಶಿ ಮೇಲೆ 19 ಕ್ರಿಮಿನಲ್ ಕೇಸ್! ಸಂಪುಟ ಸಚಿವರ ಆಸ್ತಿ ಕೋಟಿ ಕೋಟಿ!

Dk Shivakumar's Cabinet: ಡಿಕೆಶಿ ಮೇಲೆ 19 ಕ್ರಿಮಿನಲ್ ಕೇಸ್! ಸಂಪುಟ ಸಚಿವರ ಆಸ್ತಿ ಕೋಟಿ ಕೋಟಿ!

ಬೆಂಗಳೂರು: ಡಿಕೆ ಶಿವಕುಮಾರ್ (DK Shivakumar) ಕರ್ನಾಟಕದ ನೂತನ ಮುಖ್ಯಮಂತ್ರಿಯಾಗಿ (new Chief Minister of Karnataka) ಅಧಿಕಾರ ಸ್ವೀಕರಿಸಿದ್ದೂ ಆಗಿದೆ, ಅವರೊಂದಿಗೆ 13 ಸಚಿವರು (ministers) ಪ್ರಮಾಣವಚನ (Oath) ಸ್ವೀಕರಿಸಿದ್ದರು. ಈ ಪೈಕಿ ರಾಮಲಿಂಗಾರೆಡ್ಡಿ (Ramalinga Reddy) ರಾಜೀನಾಮೆ ನೀಡಿ, ವಾಪಸ್ ಪಡೆದಿದ್ದು, ಕೆಹೆಚ್ ಮುನಿಯಪ್ಪ (KH Muniyappa) ತಮ್ಮ ಖಾತೆಗೆ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಈ ಮಧ್ಯೆ ಡಿಕೆಶಿ ಸಚಿವ ಸಂಪುಟದ ಸಚಿವರ ಆಸ್ತಿ ಹಾಗೂ ಕ್ರಿಮಿನಲ್ ಕೇಸ್‌ಗಳ (assets and criminal cases) ವಿವರ ಬಹಿರಂಗವಾಗಿದೆ. ಡಿಕೆಶಿ ಸೇರಿದಂತೆ ಎಲ್ಲಾ 14 ಸಚಿವರು ಕೋಟಿ ಕೋಟಿ ಸಂಪತ್ತಿನ ಒಡೆಯರಾಗಿದ್ದು, ಎಲ್ಲರ ಮೇಲೂ ಕ್ರಿಮಿನಲ್ ಕೇಸ್‌ಗಳಿವೆ!

ಡಿಕೆ ಶಿವಕುಮಾರ ಹಾಗೂ ಸಚಿವ ಸಂಪುಟದ ಸದಸ್ಯರ ಆಸ್ತಿ ಹಾಗೂ ಕ್ರಿಮಿನಲ್ ಕೇಸ್ ವಿವರ ಬಹಿರಂಗಗೊಂಡಿದೆ. ಅಸೋಸಿಯೇಷನ್ ಫಾರ್ ಡೆಮಾಕ್ರಟಿಕ್ ರಿಫಾರ್ಮ್ಸ್ ಎಂಬ ಖಾಸಗಿ ಸಂಸ್ಥೆ ಈ ಬಗ್ಗೆ ವಿವರ ಸಂಗ್ರಹಿಸಿದ್ದು, ಇದೀಗ ರಿಲೀಸ್ ಮಾಡಿದೆ. ಇದರ ಪ್ರಕಾರ ಡಿಕೆ ಶಿವಕುಮಾರ್ ಹಾಗೂ ಅವರ ಸಂಪುಟದ ಸಚಿವರು ಕೋಟಿ ಕೋಟಿ ಆಸ್ತಿ ಹೊಂದಿದ್ದಾರೆ. ಜೊತೆಗೆ ಎಲ್ಲಾ 14 ಮಂದಿ ಮೇಲೂ ಕ್ರಿಮಿನಲ್ ಕೇಸ್‌ಗಳು ದಾಖಲಾಗಿವೆ.

Source : News18 Kannada

2 hours ago

Home Flash News