Select Location
All Locations
State
Region
City / District
ಹೊಸ ಕಾರು ಖರೀದಿಸಿ ಖುಷಿ ಹಂಚಿಕೊಂಡ ಬಿಗ್‌ಬಾಸ್ ಖ್ಯಾತಿಯ ಮಲ್ಲಮ್ಮ

ಹೊಸ ಕಾರು ಖರೀದಿಸಿ ಖುಷಿ ಹಂಚಿಕೊಂಡ ಬಿಗ್‌ಬಾಸ್ ಖ್ಯಾತಿಯ ಮಲ್ಲಮ್ಮ

ಬಿಗ್‌ಬಾಸ್‌ ಕನ್ನಡ ಸೀಸನ್‌ 12 ರ ಸ್ಪರ್ಧಿಯಾಗಿದ್ದ ಮಲ್ಲಮ್ಮ ಇತ್ತೀಚೆಗೆ ಹೊಸ ಕಾರನ್ನು ಖರೀದಿ ಮಾಡಿದ್ದಾರೆ. ಮಲ್ಲಮ್ಮ ಮಾರುತಿ ಸುಜುಕಿ ಡಿಸೈರ್‌ ಟೂರ್‌ ಕಾರನ್ನು ಖರೀದಿಸಿದ್ದಾರೆ. ಮಾತ್ರವಲ್ಲದೆ, ಈ ಸುಂದರ ಕ್ಷಣವನ್ನು ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಂಡು ‘ಕನಸಿನ ಮೊದಲ ಹೆಜ್ಜೆ’ ಎಂದು ಬರೆದುಕೊಂಡಿದ್ದಾರೆ.

ಮಗ–ಸೊಸೆ ಹಾಗೂ ಮೊಮ್ಮಕ್ಕಳೊಂದಿಗೆ ಶೋರೂಮ್‌ಗೆ ಆಗಮಿಸಿದ ಮಲ್ಲಮ್ಮ ಕೇಕ್‌ ಕತ್ತರಿಸುವ ಮೂಲಕ ಹೊಸ ಕಾರಿನ ಆಗಮನವನ್ನು ಸಂಭ್ರಮಿಸಿದ್ದಾರೆ. ಮಲ್ಲಮ್ಮ ಬಿಗ್‌ಬಾಸ್ ಮನೆಗೆ ಅಚ್ಚರಿ ರೀತಿಯಲ್ಲಿ ಪ್ರವೇಶ ಪಡೆದುಕೊಂಡಿದ್ದರು. ಮನೆಗೆ ಕಾಲಿಡುವ ಮುನ್ನ ಕಿಚ್ಚ ಸುದೀಪ್ ಮುಂದೆ 'ನಾನು ಎಲ್ಲರಂತೆ ಆಟ ಆಡುತ್ತೇನೆ' ಎಂದಿದ್ದರು. ಮನೆಯಲ್ಲಿ ಇವರೇ ಹಿರಿಯರೂ ಆಗಿದ್ದರು. ಆದರೆ ಕೆಲವೇ ವಾರಗಳಲ್ಲಿ ಬಿಗ್‌ಬಾಸ್‌ ಮನೆಯಿಂದ ಹೊರ ಬಂದರು.

Source : Prajavani

1 hour ago

Home Flash News