DK Shivakumar Cabinet: ಡಿಕೆ ಸಂಪುಟ ಶೇಕ್, ಪತನವಾಗುತ್ತಾ ಮತ್ತೊಂದು ವಿಕೆಟ್!? ಮತ್ತೊಬ್ಬ ಸಚಿವರಿಂದಲೂ ಅಸಮಾಧಾನ ಸ್ಫೋಟ!
ಬೆಂಗಳೂರು (ಜೂ.05): ರಾಜ್ಯ ಸಚಿವ ಸಂಪುಟ ರಚನೆಯಾದ ಎರಡೇ ದಿನಕ್ಕೆ ಅಸಮಾಧಾನ ಸ್ಫೋಟಗೊಳ್ತಿದೆ. ಖಾತೆ ಹಂಚಿಕೆ ವಿಚಾರದಲ್ಲಿ ಅಸಮಾಧಾನಗೊಂಡು ರಾಮಲಿಂಗಾರೆಡ್ಡಿ (Ramalinaga Reddy) ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ. ಈ ಆಘಾತದ ನಡುವೆಯೇ ನೂತನ ಮುಖ್ಯಮಂತ್ರಿ ಡಿಕೆ ಶಿವಕುಮಾರ್ಗೆ (DK Shivakumar) ಮತ್ತೊಂದು ಸಂಕಷ್ಟ ಶುರುವಾಗಿದ್ದು, ಪಕ್ಷದ ಮತ್ತೊಬ್ಬ ಹಿರಿಯ ನಾಯಕ ಕೆ.ಹೆಚ್ ಮುನಿಯಪ್ಪ (K H Muniyappa) ಅವರು ಖಾತೆ ಹಂಚಿಕೆ ಬಗ್ಗೆ ಅಸಮಾಧಾನ ಹೊರಹಾಕಿದ್ದು, ಬದಲಾವಣೆಗೆ ಬೇಡಿಕೆ ಇಟ್ಟಿದ್ದಾರೆ ಎಂದು ಮೂಲಗಳಿಂದ ತಿಳಿದು ಬಂದಿದೆ.
ಕೇಳಿದ ಖಾತೆ ಕೊಟ್ಟಿಲ್ಲ ಎಂದು ಮುನಿಯಪ್ಪ ಕ್ಯಾತೆ! ಕೆ.ಹೆಚ್ ಮುನಿಯಪ್ಪ ಅವರು ಸಮಾಜ ಕಲ್ಯಾಣ ಇಲಾಖೆ ಖಾತೆಗೆ ಬೇಡಿಕೆ ಇಟ್ಟಿದ್ದರು. ಆದ್ರೆ ಹೈಕಮಾಂಡ್ ಅವರಿಗೆ ಆಹಾರ & ನಾಗರಿಕ ಸರಬರಾಜು ಇಲಾಖೆ ನೀಡಿದೆ. ಇದ್ರಿಂದ ಬೇಸರಗೊಂಡ ಮುನಿಯಪ್ಪ, ನಾನು ಕೇಳಿದ ಖಾತೆ ಕೊಡದೆ ಹಳೇ ಖಾತೆಯನ್ನೇ ಕೊಟ್ಟಿದ್ದಾರೆ ಎಂದು ಅಸಮಾಧಾನ ಹೊರಹಾಕಿದ್ರು. ಖಾತೆ ಬದಲಾವಣೆಗೆ ಒತ್ತಾಯ ತಮಗೆ ಕೊಟ್ಟಿರುವ ಖಾತೆಯನ್ನ ಬದಲಿಸುವಂತೆ ಸಚಿವ ಕೆ. ಹೆಚ್ ಮುನಿಯಪ್ಪ ಅವರು ಹೈಕಮಾಂಡ್ ನಾಯಕರಿಗೆ ಒತ್ತಾಯಿಸಿದ್ದು, ನನ್ನ ಖಾತೆ ಬದಲಾವಣೆ ಮಾಡುವವರೆಗೂ ನಾನು ಅಧಿಕಾರವಹಿಸಿಕೊಳ್ಳಲ್ಲ ಎಂದು ಪಟ್ಟು ಹಿಡಿದಿದ್ದಾರೆ.
ಸಿದ್ದರಾಮಯ್ಯ ಉಪಸ್ಥಿತಿಯಲ್ಲಿ ನಡೆಯುತ್ತಾ ಸಂಧಾನ? ಸಿದ್ದರಾಮಯ್ಯ ಉಪಸ್ಥಿತಿಯಲ್ಲಿ ಖಾತೆ ಬದಲಾವಣೆಗೆ ಕೆಲವರು ಪ್ರಸ್ತಾಪ ಮಾಡುವ ಸಾಧ್ಯತೆ ಇದ್ದು, ಖಾತೆ ಹಂಚಿಕೆಯಲ್ಲಿ ಕೆ.ಸಿ.ವೇಣುಗೋಪಾಲ್ ಏಕಪಕ್ಷೀಯ ನಿರ್ಧಾರ ಕೈಗೊಂಡಿದ್ದಾರೆ ಎಂದು ಕೆಲವರು ಅಸಮಾಧಾನಗೊಂಡಿದ್ದಾರೆ ಎನ್ನುವ ಮಾಹಿತಿ ಮೂಲಗಳಿಂದ ತಿಳಿದುಕೊಂಡು ಬಂದಿದೆ. ಡಿಕೆಶಿ ಸಂಪುಟದ ಮೊದಲ ಟಿಕೆಟ್ ಪತನ! ಮುಖ್ಯಮಂತ್ರಿ ಡಿ ಕೆ ಶಿವಕುಮಾರ್ ನೇತೃತ್ವದ ಸರ್ಕಾರಕ್ಕೆ ಆರಂಭದಲ್ಲಿಯೇ ಬಿಗ್ ಶಾಕ್ ಎದುರಾಗಿದೆ. ಸಚಿವ ರಾಮಲಿಂಗಾ ರೆಡ್ಡಿ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ. ಡಿಕೆ ಶಿವಕುಮಾರ್ ನೇತೃತ್ವದ ಸಚಿವ ಸಂಪುಟದಲ್ಲಿ ತಾವು ನಿರೀಕ್ಷಿಸಿದ್ದ ಬೆಂಗಳೂರು ನಗರಾಭಿವೃದ್ಧಿ ಖಾತೆ ಸಿಕ್ಕಿಲ್ಲ ಎಂದು ನೊಂದು ರಾಜೀನಾಮೆ ನೀಡಿದ್ದಾರೆ. ತಮ್ಮ ರಾಜೀನಾಮೆ ಪತ್ರವನ್ನು ಮುಖ್ಯಮಂತ್ರಿಗಳಿಗೆ ರವಾನಿಸಿರುವುದಾಗಿ ಸ್ವತಃ ರಾಮಲಿಂಗಾ ರೆಡ್ಡಿಯವರು ಇಂದು ಬೆಂಗಳೂರಿನಲ್ಲಿ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.