Big Update: ಈ 9 ನಿಲ್ದಾಣಗಳಲ್ಲಿ ನಿಲ್ಲೋದಿಲ್ಲ ತಿರುಪತಿ ರೈಲು, 2 ತಾಸು ಪ್ರಯಾಣವೂ ಹೆಚ್ಚಳ; ಟಿಕೆಟ್ ಬುಕ್ ಮಾಡೋ ಮುನ್ನ ಎಚ್ಚರ!
ಚಿಕ್ಕಮಗಳೂರು: ಕಾಫಿನಾಡಿನ (Chikkamagaluru) ಜನತೆಯ ಬಹುದಿನದ ಕನಸಾಗಿದ್ದ ತಿರುಪತಿ ನೇರ ರೈಲು ಸಂಪರ್ಕದ ಸಂತಸ ಕರಗುವ ಮೊದಲೇ ಪ್ರಯಾಣಿಕರಿಗೆ ಮಹತ್ವದ ಅಪ್ಡೇಟ್ (Update) ಒಂದನ್ನು ರೈಲ್ವೆ ಇಲಾಖೆ ನೀಡುತ್ತಿದೆ! ಕೆಎಸ್‌ಆರ್ ಬೆಂಗಳೂರು ಮತ್ತು ವೈಟ್‌ಫೀಲ್ಡ್ ನಡುವೆ ನಡೆಯುತ್ತಿರುವ ಚತುಷ್ಪಥ ರೈಲ್ವೆ ಹಳಿ (Railway Track) ಕಾಮಗಾರಿಯ ಕಾರಣ ಚಿಕ್ಕಮಗಳೂರು-ತಿರುಪತಿ ಎಕ್ಸ್‌ಪ್ರೆಸ್ (ರೈಲು ಸಂಖ್ಯೆ: 17424) ತನ್ನ ಮಾರ್ಗ ಬದಲಿಸಲಿದೆ ಎಂದು ನೈಋತ್ಯ ರೈಲ್ವೆ ಅಧಿಕೃತ ಪ್ರಕಟಣೆಯಲ್ಲಿ (Announcement) ತಿಳಿಸಿದೆ.
ಜೂನ್ 5, 2026 (ಇಂದು-ಶುಕ್ರವಾರ), ಜೂನ್ 12, 2026 ಮತ್ತು ಜುಲೈ 3, 2026 ಈ ಮೂರು ದಿನಗಳಂದು ಮಾತ್ರ ರೈಲು ಬದಲಿ ಮಾರ್ಗದಲ್ಲಿ ಸಂಚರಿಸಲಿದ್ದು, ಉಳಿದ ದಿನಗಳಲ್ಲಿ ಸಾಮಾನ್ಯ ಮಾರ್ಗದಲ್ಲೇ ಓಡಲಿದೆ. ಇದರಿಂದ 2 ತಾಸು ಪ್ರಯಾಣದ ಅವಧಿ ಹೆಚ್ಚಲಿದೆ. ಹಾಗಾಗಿ ಪ್ರಯಾಣಿಕರು ಇದನ್ನು ಗಮನಿಸಬೇಕು ಎಂದು ತಿಳಿಸಿದೆ.
ಸಾಮಾನ್ಯ ದಿನಗಳಲ್ಲಿ ರೈಲು ಅರಸೀಕೆರೆ, ತಿಪಟೂರು, ತುಮಕೂರು, ಬೆಂಗಳೂರು, ಕಟಪಾಡಿ, ಚಿತ್ತೂರು ಮಾರ್ಗವಾಗಿ ಸಂಚರಿಸಿದರೆ, ಮೇಲ್ತಿಳಿಸಿದ ಮೂರು ದಿನಗಳಂದು ಕಡೂರು, ಬಿರೂರು, ಚಿಕ್ಕಜಾಜೂರು, ರಾಯದುರ್ಗ, ಬಳ್ಳಾರಿ, ಗುಂತಕಲ್ ಮತ್ತು ರೇಣಿಗುಂಟ ಮಾರ್ಗವಾಗಿ ತಿರುಪತಿ ತಲುಪಲಿದೆ. ಈ ಬದಲಿ ಮಾರ್ಗ ಉದ್ದವಾಗಿರುವ ಕಾರಣ ಪ್ರಯಾಣ ಸಮಯ ಸ್ವಲ್ಪ ಹೆಚ್ಚಾಗಬಹುದು.