Select Location
All Locations
State
Region
City / District
TMC ಇಬ್ಭಾಗಕ್ಕೆ ಕಾರಣವಾಯ್ತು ಸುವೇಂದು–ರುತಬ್ರತಾ ಬ್ಯಾನರ್ಜಿ ‘ಆಕಸ್ಮಿಕ’ ಭೇಟಿ!

TMC ಇಬ್ಭಾಗಕ್ಕೆ ಕಾರಣವಾಯ್ತು ಸುವೇಂದು–ರುತಬ್ರತಾ ಬ್ಯಾನರ್ಜಿ ‘ಆಕಸ್ಮಿಕ’ ಭೇಟಿ!

ಕೋಲ್ಕತ್ತ: ಪಶ್ಚಿಮ ಬಂಗಾಳದಲ್ಲಿ ಬಂಡಾಯ ಎದ್ದಿರುವ ತೃಣಮೂಲ ಕಾಂಗ್ರೆಸ್ ಪಕ್ಷದ (ಟಿಎಂಸಿ) 58 ಶಾಸಕರ ಬೆಂಬಲದೊಂದಿಗೆ ರುತಬ್ರತಾ ಬ್ಯಾನರ್ಜಿ ಅವರು ವಿಧಾನಸಭೆಗೆ ಬಂದಿದ್ದು ಹಲವರಿಗೆ ಆಘಾತ ತಂದಿರಬಹುದು. ಆದರೆ, ಬುಧವಾರ ನಡೆದ ಈ ನಾಟಕೀಯ ಬೆಳವಣಿಗೆಯ ಬೀಜ ಬಹಳ ಹಿಂದೆಯೇ ಬಿತ್ತಲ್ಪಟ್ಟಿತ್ತು ಎಂಬುದು ವಿಶೇಷ.

ಈಚೆಗೆ ನಡೆದ ವಿಧಾನಸಭಾ ಚುನಾವಣೆಯಲ್ಲಿ ಟಿಎಂಸಿ ಪಕ್ಷವು ಸೋಲು ಕಂಡ ತಕ್ಷಣವೇ ಪಕ್ಷದೊಳಗೆ ‘ಬಂಡಾಯ’ದ ಕಹಳೆ ಮೊಳಗಿತ್ತು. ಇದು ಅಂತಿಮವಾಗಿ 28 ವರ್ಷಗಳ ಇತಿಹಾಸವಿರುವ ಪಕ್ಷದ ಇಬ್ಭಾಗಕ್ಕೆ ಕಾರಣವಾಯಿತು. ಈಚೆಗೆ ಬಿಜೆಪಿ ನಾಯಕ, ಪಶ್ಚಿಮ ಬಂಗಾಳ ಸಿಎಂ ಸುವೇಂದು ಅಧಿಕಾರಿ ಮತ್ತು ರುತಬ್ರತಾ ಬ್ಯಾನರ್ಜಿ ಅವರು ದೆಹಲಿಯಲ್ಲಿ ‘ಆಕಸ್ಮಿಕ’ ಭೇಟಿಯಾಗಿದ್ದರು ಎನ್ನಲಾಗಿದೆ. ಬಳಿಕ ನಡೆದದ್ದೇ ಟಿಎಂಸಿ ಶಾಸಕರ ಸಹಿ ಸಂಗ್ರಹ ಪ್ರಸಹನ, ಟಿಎಂಸಿ ಸಂಸದ ಅಭಿಷೇಕ್ ಬ್ಯಾನರ್ಜಿ ಪ್ರಭಾವದ ವಿರುದ್ಧದ ಅಸಮಾಧಾನ ಮತ್ತು ಉತ್ತರಾಧಿಕಾರದ ಹೋರಾಟ. ಇವೆಲ್ಲಾ ಕೇವಲ 13 ದಿನಗಳಲ್ಲಿ ಅತ್ಯಂತ ವೇಗವಾಗಿ ನಡೆದ ಪ್ರಮುಖ ಬೆಳವಣಿಗೆಗಳಾಗಿವೆ. ಕಾಂಗ್ರೆಸ್‌ನಿಂದ ಹೊರಬಂದು 1998ರ ಜನವರಿ 1ರಂದು ಮಮತಾ ಬ್ಯಾನರ್ಜಿ ಅವರು ಸ್ಥಾಪಿಸಿದ್ದ ಪಕ್ಷವನ್ನು ರುತಬ್ರತಾ ಬ್ಯಾನರ್ಜಿ ಅವರ ದಂಗೆಯು ಅಧಿಕೃತವಾಗಿ ಇಬ್ಬಾಗ ಮಾಡಿದೆ.

Source : Prajavani

1 hour ago

Home Flash News