Select Location
All Locations
State
Region
City / District
K Annamalai Birthday: ಕೆ ಅಣ್ಣಾಮಲೈ ಹುಟ್ಟುಹಬ್ಬ: ಕರ್ನಾಟಕದಲ್ಲಿ ವೃತ್ತಿಜೀವನ, ರಾಜೀನಾಮೆ ಮತ್ತು ಬಿಜೆಪಿ ಪಯಣದ ಸಮಗ್ರ ನೋಟ

K Annamalai Birthday: ಕೆ ಅಣ್ಣಾಮಲೈ ಹುಟ್ಟುಹಬ್ಬ: ಕರ್ನಾಟಕದಲ್ಲಿ ವೃತ್ತಿಜೀವನ, ರಾಜೀನಾಮೆ ಮತ್ತು ಬಿಜೆಪಿ ಪಯಣದ ಸಮಗ್ರ ನೋಟ

K Annamalai Birthday: ಕೆ. ಅಣ್ಣಾಮಲೈ ಅವರ 42ನೇ ಹುಟ್ಟುಹಬ್ಬದ ಹಿನ್ನೆಲೆಯಲ್ಲಿ, ಕರ್ನಾಟಕದಲ್ಲಿ 'ಸಿಂಗಂ' ಆಗಿ ಹೆಸರು ಗಳಿಸಿದ್ದ ಅವರ ಐಪಿಎಸ್ ವೃತ್ತಿ, ಜನಸೇವೆಗಾಗಿ ಹುದ್ದೆಗೆ ರಾಜೀನಾಮೆ, ಬಿಜೆಪಿ ಸೇರ್ಪಡೆ ಮತ್ತು ತಮಿಳುನಾಡು ರಾಜ್ಯಾಧ್ಯಕ್ಷರಾಗಿ ರಾಜಕೀಯ ಪಯಣವನ್ನು ಈ ಲೇಖನ ವಿವರಿಸುತ್ತದೆ. ಇತ್ತೀಚೆಗೆ ಬಿಜೆಪಿಗೆ ರಾಜೀನಾಮೆ ನೀಡಿರುವ ಅವರ ಮುಂದಿನ ರಾಜಕೀಯ ನಡೆ ಬಗ್ಗೆ ಚರ್ಚೆಗಳು ನಡೆದಿವೆ. ದಕ್ಷಿಣ ಭಾರತದ ರಾಜಕೀಯದಲ್ಲಿ ಅವರ ಪಾತ್ರ ಮಹತ್ವದ್ದು.

ಚೆನ್ನೈ, ಜೂನ್ -4: ತಮಿಳುನಾಡು ಬಿಜೆಪಿ ರಾಜ್ಯಾಧ್ಯಕ್ಷರಾಗಿ ಸೇವೆ ಸಲ್ಲಿಸಿದ್ದ, ಇತ್ತೀಚೆಗಷ್ಟೇ ಬಿಜೆಪಿಗೆ ರಾಜೀನಾಮೆ ನೀಡಿ ಬಹಳ ಸುದ್ದಿಯಲ್ಲಿರುವ ಜನಪ್ರಿಯ ನಾಯಕ ಕೆ. ಅಣ್ಣಾಮಲೈ(K Annamalai) ಅವರು ತಮ್ಮ 42ನೇ ಜನ್ಮದಿನವನ್ನು ಆಚರಿಸಿಕೊಳ್ಳುತ್ತಿದ್ದಾರೆ. ಕರ್ನಾಟಕದಲ್ಲಿ ದಕ್ಷ ಪೊಲೀಸ್ ಅಧಿಕಾರಿಯಾಗಿ ಸೇವೆ ಸಲ್ಲಿಸಿ ‘ಸಿಂಗಂ’ ಎಂದೇ ಖ್ಯಾತಿ ಗಳಿಸಿದ್ದ ಅಣ್ಣಾಮಲೈ, ನಂತರ ರಾಜಕೀಯಕ್ಕೆ ಧುಮುಕಿ ದೇಶದ ಗಮನ ಸೆಳೆದ ಯುವ ಮುಖಂಡರಾಗಿದ್ದಾರೆ.

ಅವರ ಜನ್ಮದಿನದ ಈ ಸಂದರ್ಭದಲ್ಲಿ ಅವರ ಕರ್ನಾಟಕದ ಕೆರಿಯರ್, ಪೊಲೀಸ್ ಹುದ್ದೆಗೆ ನೀಡಿದ ರಾಜೀನಾಮೆ, ಬಿಜೆಪಿ ಸೇರ್ಪಡೆ ಮತ್ತು ಪ್ರಸ್ತುತ ಅವರ ರಾಜಕೀಯ ಸ್ಥಾನಮಾನದ ಕುರಿತಾದ ಸಂಪೂರ್ಣ ಮಾಹಿತಿ ಇಲ್ಲಿದೆ. ಕರ್ನಾಟಕದಲ್ಲಿ ವೃತ್ತಿಜೀವನ 2011ರ ಬ್ಯಾಚ್‌ನ ಐಪಿಎಸ್ (IPS) ಅಧಿಕಾರಿಯಾದ ಅಣ್ಣಾಮಲೈ ಅವರು ತಮ್ಮ ವೃತ್ತಿಜೀವನವನ್ನು ಆರಂಭಿಸಿದ್ದು ಕರ್ನಾಟಕದಲ್ಲಿ. ಉಡುಪಿ ಜಿಲ್ಲೆಯ ಕಾರ್ಕಳದ ಸಹಾಯಕ ಪೊಲೀಸ್ ವರಿಷ್ಠಾಧಿಕಾರಿ (ASP)ಯಾಗಿ ಸೇವೆ ಆರಂಭಿಸಿದ ಅವರು, ನಂತರ ಉಡುಪಿ ಮತ್ತು ಚಿಕ್ಕಮಗಳೂರು ಜಿಲ್ಲೆಗಳ ಪೊಲೀಸ್ ವರಿಷ್ಠಾಧಿಕಾರಿಯಾಗಿ (SP) ದಕ್ಷತೆಯಿಂದ ಕೆಲಸ ಮಾಡಿದರು.

Source : TV9 Kannada

1 hour ago

Home Flash News