Select Location
All Locations
State
Region
City / District
Pakistan Satellites Monitoring India: ಭಾರತದ ಮೇಲೆ ನಿಗಾ ಇಡಲು ಪಾಕ್‌ನಿಂದ 16 ತಿಂಗಳಲ್ಲಿ 6 ಉಪಗ್ರಹ ಉಡಾವಣೆ!

Pakistan Satellites Monitoring India: ಭಾರತದ ಮೇಲೆ ನಿಗಾ ಇಡಲು ಪಾಕ್‌ನಿಂದ 16 ತಿಂಗಳಲ್ಲಿ 6 ಉಪಗ್ರಹ ಉಡಾವಣೆ!

ಇಸ್ಲಾಮಾಬಾದ್‌: ಭಾರತದ ಮೇಲೆ ಕಣ್ಣಿಡುವ ಉದ್ದೇಶದಿಂದ ನೆರೆದೇಶ ಪಾಕಿಸ್ತಾನವು ಕಳೆದ 16 ತಿಂಗಳುಗಳಲ್ಲಿ 6 ಉಪಗ್ರಹಗಳನ್ನು ಉಡಾವಣೆ ಮಾಡಿದೆ ಎಂದು ‘ದ ಪ್ರಿಂಟ್‌’ ವರದಿ ಮಾಡಿದೆ. ಪಾಕ್‌ನ ಬಾಹ್ಯಾಕಾಶ ಸಂಸ್ಥೆ ಸುಪಾರ್ಕೋ ಸ್ಥಾಪನೆಯಾದಾಗಿನಿಂದ ಹಾರಿಸಿರುವುದು 15 ಉಪಗ್ರಹಗಳನ್ನಷ್ಟೇ ಎಂಬುದು ಗಮನಾರ್ಹ.

2025ರ ಜನವರಿಯಿಂದ ಈ ವರ್ಷದ ಜೂನ್‌ ವರೆಗೆ ಪಾಕ್‌ ಉಡಾವಣೆ ಮಾಡಿದ ಬಹುತೇಕ ಉಪಗ್ರಹಗಳನ್ನು, ಭಾರತದ ಭೂಪ್ರದೇಶ ಕಾಣುವಂತೆ ಕಕ್ಷೆಗಳಲ್ಲಿ ನಿಯೋಜಿಸಲಾಗಿದೆ. ಅದರಲ್ಲೂ ಮುಖ್ಯವಾಗಿ ಇವುಗಳು ಜಮ್ಮು ಕಾಶ್ಮೀರದ ಮೇಲೆ ಕಣ್ಣಿಟ್ಟಿದೆ ಎಂದು ವರದಿ ಹೇಳಿದೆ. ಕಕ್ಷೆಯಲ್ಲಿರುವ ಸ್ಯಾಟಲೈಟ್‌ಗಳಲ್ಲಿ ಉತ್ತಮ ರೆಸಲ್ಯೂಷನ್‌ (ಸ್ಪಷ್ಟತೆ) ಕ್ಯಾಮರಾ, ಸೆನ್ಸರ್‌, ಎಐ ಬೆಂಬಲಿತ ಫೊಟೋ ಪರಿಶೀಲನೆ ತಂತ್ರಜ್ಞಾನವಿದ್ದು, ನೆರೆರಾಷ್ಟ್ರದಲ್ಲಿ ಆಗುತ್ತಿರುವ ಮೂಲಸೌಕರ್ಯ ಅಭಿವೃದ್ಧಿ, ಸೇನಾ ನೆಲೆಗಳು, ಸೇನೆಯ ಓಡಾಟ ಮತ್ತು ಸಮುದ್ರದಲ್ಲಾಗುವ ಚಟುವಟಿಕೆಗಳನ್ನು ನಿಖರವಾಗಿ ನೋಡಬಹುದಾಗಿದೆ.

Source : Asianet News

1 hour ago

Home Flash News