Select Location
All Locations
State
Region
City / District
Achievement: ಕೇವಲ 17 ರ ವಯಸ್ಸಲ್ಲಿ ಫೋರ್ಬ್ಸ್‌ ಪಟ್ಟಿಯಲ್ಲಿ ಬೆಂಗಳೂರು ಜಾಣೆ; 6 ದೇಶದಲ್ಲಿ ಈಕೆ ಫೇಮಸ್‌ ಆಗಲು ಕಾರಣವೇನು?

Achievement: ಕೇವಲ 17 ರ ವಯಸ್ಸಲ್ಲಿ ಫೋರ್ಬ್ಸ್‌ ಪಟ್ಟಿಯಲ್ಲಿ ಬೆಂಗಳೂರು ಜಾಣೆ; 6 ದೇಶದಲ್ಲಿ ಈಕೆ ಫೇಮಸ್‌ ಆಗಲು ಕಾರಣವೇನು?

ಬೆಂಗಳೂರು: ಚಿಕ್ಕ ವಯಸ್ಸಿನಲ್ಲೇ (Small Age) ತಮ್ಮನ ನೋವು ಕಂಡು ಕಣ್ಣೀರು ಹಾಕಿದ ಹುಡುಗಿ ಇಂದು ಇಡೀ ಜಗತ್ತಿನ ಗಮನ ಸೆಳೆದಿದ್ದಾಳೆ! ಬೆಂಗಳೂರಿನ ದಿವಾ ಉತ್ಕರ್ಷ ತನ್ನ 12ನೇ ವಯಸ್ಸಿನಲ್ಲೇ ಟೈಪ್ 1 ಮಧುಮೇಹ ಪೀಡಿತ ಬಡ ಮಕ್ಕಳಿಗಾಗಿ "ಪ್ರಾಜೆಕ್ಟ್ ಸೂರ್ಯ" ಎಂಬ ಸಂಸ್ಥೆ (Foundation) ಹುಟ್ಟುಹಾಕಿ ಇಂದು ಫೋರ್ಬ್ಸ್ 30 ಅಂಡರ್ 30 ಏಷ್ಯಾ 2026 ಪಟ್ಟಿಯಲ್ಲಿ ಅತ್ಯಂತ ಕಿರಿಯ ವಿಜೇತೆಯಾಗಿ ಹೊರಹೊಮ್ಮಿದ್ದಾಳೆ!

ದಿವಾ ಅವರ ತಮ್ಮ ಸೂರ್ಯನಿಗೆ ಟೈಪ್ 1 ಮಧುಮೇಹ ಇರುವುದು ಪತ್ತೆಯಾದಾಗ ಇಡೀ ಕುಟುಂಬ ಬೆಚ್ಚಿಬಿದ್ದಿತು. ಪ್ರತಿದಿನ ಇನ್ಸುಲಿನ್ ಚುಚ್ಚುಮದ್ದು, ನಿರಂತರ ಗ್ಲೂಕೋಸ್ ಪರೀಕ್ಷೆ ಮತ್ತು ಭಾವನಾತ್ಮಕ ಹೋರಾಟ ಕಣ್ಣಾರೆ ಕಂಡ ದಿವಾ ಮನದಲ್ಲಿ ಒಂದು ಪ್ರಶ್ನೆ ಮೂಡಿತು. "ಇನ್ಸುಲಿನ್ ಕೊಳ್ಳಲಾಗದ ಬಡ ಮಕ್ಕಳ ಗತಿ ಏನು?" ಈ ಒಂದು ಪ್ರಶ್ನೆ 2021ರಲ್ಲಿ "ಪ್ರಾಜೆಕ್ಟ್ ಸೂರ್ಯ" ಸ್ಥಾಪನೆಗೆ ನಾಂದಿ ಹಾಡಿತು. ಕನ್ನಡದಲ್ಲಿ "ಸೂರ್ಯ" ಅಂದರೆ ಬೆಳಕು, ಟೈಪ್ 1 ಮಧುಮೇಹ ಪೀಡಿತ ಮಕ್ಕಳ ಜೀವನವನ್ನು ಸೂರ್ಯನಂತೆ ಬೆಳಗಿಸುವ ಸಂಕಲ್ಪವೇ ಈ ಸಂಸ್ಥೆಯ ಆಶಯ.

ಇಂದು 17ರ ಹರೆಯದ ದಿವಾ ನೇತೃತ್ವದ ಈ ಯುವ ಸಂಸ್ಥೆ ಭಾರತ, UAE, ಅಮೆರಿಕ, ಕೆನಡಾ, ಮೊರಾಕೊ ಮತ್ತು ನೈಜೀರಿಯಾ ಸೇರಿ 6 ದೇಶಗಳ 10 ನಗರಗಳಿಗೆ ವ್ಯಾಪಿಸಿದೆ. ಇದುವರೆಗೆ 4.02 ಲಕ್ಷಕ್ಕೂ ಹೆಚ್ಚು ಜನರನ್ನು ತಲುಪಿ, 19,858 ವಿದ್ಯಾರ್ಥಿಗಳಿಗೆ ಜಾಗೃತಿ ಕಾರ್ಯಕ್ರಮ ನಡೆಸಿ, 3,190 ಮಕ್ಕಳಿಗೆ ನೆರವು ನೀಡಲಾಗಿದೆ. ಇದಲ್ಲದೆ 200ಕ್ಕೂ ಹೆಚ್ಚು ಆಶಾ ಕಾರ್ಯಕರ್ತೆಯರಿಗೆ ತರಬೇತಿ ನೀಡಿ 49,500 ಗ್ರಾಮೀಣ ಜನರನ್ನು ತಲುಪಲಾಗಿದೆ. 4,500 ಇನ್ಸುಲಿನ್ ಶೀಷೆ, 1,000 ಸಿರಿಂಜ್ ದಾನ ಮಾಡಿ ₹20 ಲಕ್ಷ ನಿಧಿ ಸಂಗ್ರಹಿಸಲಾಗಿದೆ. ಎಂದು ಬೆಂಗಳೂರು ಮಿರರ್‌ ವರದಿ ಮಾಡಿದೆ.

Source : News18 Kannada

1 hour ago

Home Flash News